Total Rs. 0
Full Information of an Event
Back to Home | Other News
ಕೊಲ್ಲೂರು ಶ್ರೀ ಮೂಕಾಂಬಿಕ ಸನ್ನಿಧಿಯಲ್ಲಿ ಸಾಮೂಹಿಕ ವಿದ್ಯಾರಂಭ: ಸಾವಿರಾರು ಮಕ್ಕಳ ಅಕ್ಷರಭ್ಯಾಸ
ಕುಂದಾಪುರ: ಪ್ರಸಿದ್ದ ಶಕ್ತಿ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಸಾಮೂಹಿಕ ಅಕ್ಷರಭ್ಯಾಸ ಕಾರ್ಯಕ್ರಮ ಭರ್ಜರಿಯಾಗಿ ನಡೆಯಿತು. ವಿಜಯದಶಮಿಯ ಪ್ರಯುಕ್ತ ಕರ್ನಾಟಕದ ಮತ್ತು ಕೇರಳ,ಮಹಾರಾಷ್ಟ್ರ ಸೇರಿದಂತೆ ವಿವಿದೆಡೆಯಿಂದ ಆಗಮಿಸುವ ಸಾವಿರಾರು ಭಕ್ತರು ಮಕ್ಕಳಿಗೆ ವಿದ್ಯಾರಂಭಮಾಡಿಸಿದರು.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಲ್ಲೂರು ಶಿವ ಮತ್ತು ಶಕ್ತಿಯರು ಸಮ್ಮಿಳಿತಗೊಂಡ ಪುಣ್ಯಕ್ಷೇತ್ರ. ಕೊಲ್ಲೂರು ಮುಕಾಂಬಿಕಾ ದೇವಸ್ಥಾನ ವಿಜಯದಶಮಿಯಂದು ನಡೆಯುವ ವಿದ್ಯಾರಂಭ ಪೂಜೆಗೆ ಪ್ರಶಸ್ತಸ್ಥಳ. ವಿಜಯದಶಮಿಯ ದಿನದಂದು ಸಾವಿರಾರಕ್ಕೂ ಅಧಿಕ ಕೇರಳ ಮತ್ತು ಕರ್ನಾಟಕದ ಭಕ್ತರು ಮೂಕಾಂಬಿಕಾ ದೇವಸ್ಥಾನದಲ್ಲಿ ತಮ್ಮ ಮಕ್ಕಳಿಗೆ ಅಕ್ಷರಭ್ಯಾಸ ನಡೆಸುವುದು ಹಿಂದಿನಿಂದಲೂ ಬಂದ ಸಂಪ್ರದಾಯ.

ಶಾರದಾ ದೇವಿಯ ಮೂರ್ತಿಯ ಎದುರಿನಲ್ಲಿ ಮಕ್ಕಳಿಗೆ ಮೊಟ್ಟಮೊದಲ ಅಕ್ಷರಭ್ಯಾಸ ಮಾಡಲಾಗುತ್ತದೆ. ಮಕ್ಕಳ ನಾಲಿಗೆಯ ಮೇಲೆ ಅರಿಶಿನ ಕೊಂಬಿನಲ್ಲಿ ಓಂಕಾರ ಬರೆಯಲಾಗುತ್ತೆ. ನಂತರ ಹೆತ್ತವರು ಮಕ್ಕಳ ಕೈ ಹಿಡಿದು ಅಕ್ಕಿಕಾಳಿನಲ್ಲಿ ಓಂಕಾರ ಹಾಗೂ ಗಣೇಶ ನಾಮ ಹಾಗೂ ತಮ್ಮ ಮಾತ್ರ ಭಾಷೆ, ಎ.ಬಿ,ಸಿ, ಸಂಖ್ಯೆಗಳು, ಅ,ಆ,ಇ ಮುಂತಾದವುಗಳನ್ನು ಬರೆಸುವುದರ ಬರೆಯುವ ಮೂಲಕ ಅಕ್ಷರಭ್ಯಾಸ ಮಾಡಿಸುತ್ತಾರೆ.

ಕೊಲ್ಲುರು ಮೂಕಾಂಬಿಕಾ ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬಂದು ಅಕ್ಷರಭ್ಯಾಸ ನಡೆಸುವವರು ಕೇರಳದ ಭಕ್ತರು. ಕೊಲ್ಲೂರು ಶ್ರೀ ಮೂಕಾಂಬಿಕೆಯ ಸನ್ನಿಧಿಯಲ್ಲಿ ಮಕ್ಕಳಿಗೆ ವಿದ್ಯಾರಂಭ ಮಾಡುವುದರಿಂದ ಮಕ್ಕಳಿಗೆ ಉಜ್ವಲ ಭವಿಷ್ಯ ಇದೆ ಅನ್ನೋದು ಕೇರಳಿಗರ ಭಕ್ತಿ ಮತ್ತು ನಂಬಿಕೆ. ಕೇರಳ ವಿದ್ಯೆಯ ವಿಷಯದಲ್ಲಿ ಉನ್ನತ ಸ್ಥಾನದಲ್ಲಿರೋದಕ್ಕೆ ಮೂಕಾಂಬಿಕೆಯ ಆಶೀರ್ವಾದವೇ ಕಾರಣ ಅನ್ನುವ ಮಾತೂ ಇದೆ. ವಿಜಯದಶಮಿ ಎಲ್ಲಾ ಆರಂಭಗಳಿಗೂ ಸೂಕ್ತವಾದ ದಿನ. ಹೀಗಾಗಿ ವಿಜಯದಶಮಿಯ ವಿದ್ಯಾರಂಭಕ್ಕೆ ವಿಶೇಷವಾದ ಮಹತ್ವ ಬಂದಿದೆ. ವರ್ಷಂಪ್ರತಿ ಈ ದಿನದಂದು ಬೆಳಗ್ಗೆ 3 ಗಂಟೆಯಿಂದಲೇ ಸಾವಿರಾರು ಭಕ್ತರು ವಿದ್ಯಾರಂಭಕ್ಕೆ ಕಾದುಕುಳಿತಿರುತ್ತಾರೆ. ಈ ಪ್ರಕ್ರಿಯೆ ಮಧ್ಯಾಹ್ನ 1.30 ರ ವರೆಗೂ ನಡೆಯುತ್ತದೆ.

ಕೊಲ್ಲೂರಿನಲ್ಲಿ ನಡೆಯುವ ಈ ಅಕ್ಷರಭ್ಯಾಸ ಶೃಂಗೇರಿ ಶಾರದಾಂಬಾ ಕ್ಷೇತ್ರವನ್ನು ಹೊರತುಪಡಿಸಿ ಬೇರೆಲ್ಲಿಯೂ ನಡೆಯೋದಿಲ್ಲ ಅನ್ನೋದು ಇಲ್ಲಿನ ವಿಶೇಷತೆ.

ನವ ಅನ್ನ ಪ್ರಾಶನ: ಕೊಲ್ಲೂರು ಭಾಗದಲ್ಲಿ ವಿಜಯ ದಶಮಿಯಂದು ಹೊಸ್ತು ಹಬ್ಬವನ್ನು ಆಚರಿಸುವುದು ಪದ್ದತಿ. ಮದ್ಯಾಹ್ನದ ಸುಮಾರಿಗೆ ತಾಯಿ ಸನ್ನಿಧಿಯಲ್ಲಿ ನಡೆಯುವ ಕದಿರು ಪೂಜೆಯ ನಂತರ ಊರವರಿಗೆ ಕದಿರು ವಿತರಣೆಯ ಶಾಸ್ತ್ರ ನಡೆಯುತ್ತದೆ.

” ಪ್ರತಿ ವರ್ಷ ಈ ವಿದ್ಯಾರಂಭ ಪ್ರಕ್ರಿಯೆ ಈ ಕ್ಷೇತ್ರದಲ್ಲಿ ನಡೆಯುತ್ತಿದ್ದು, ಈ ವರ್ಷ ೨,೦೦೦ಕ್ಕೂ ಅಧಿಕ ಮಕ್ಕಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ತಾಯಿಯ ಸನ್ನಿಧಿಯಲ್ಲಿ ವಿಧ್ಯಾರಂಭ ಮಾಡಿಸುವುದರಿಂದ ವಿದ್ಯೆಯಲ್ಲಿ ಮಕ್ಕಳಿಗೆ ಉಜ್ವಲ ಭವಿಷ್ಯ ಸಿಗುತ್ತದೆ ಎನ್ನುವುದು ನಂಬಿಕೆ ”

PLEASE CLK THIS LINK TO VIEW EARLIER NEWS
Back to Home | Other News