Total Rs. 0
Full Information of an Event
Back to Home | Other News
ಕೊಲ್ಲೂರಿನಲ್ಲಿ ಸಂಭ್ರಮದ ಮೂಕಾಂಬಿಕೆ ಜನ್ಮಾಷ್ಟಮಿ
ಕೊಲ್ಲೂರು : ನೆರೆದ ಅಸಂಖ್ಯಾಕ ಭಕ್ತರ ಸಮ್ಮುಖದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಜನ್ಮಾಷ್ಟಮಿ ಕೊಲ್ಲೂರಿನಲ್ಲಿ ಮೇ 25ರಂದು ಸಂಭ್ರಮದಿಂದ ಜರುಗಿತು. ದೇಗುಲದ ಅರ್ಚಕರಾದ ಡಾ| ಕೆ.ಎನ್‌. ನರಸಿಂಹ ಅಡಿಗ, ಶ್ರೀಧರ ಅಡಿಗ, ಮಂಜುನಾಥ ಅಡಿಗ ಹಾಗೂ ಗೋವಿಂದ ಅಡಿಗ ಅವರ ನೇತೃತ್ವದಲ್ಲಿ ಶತ ರುದ್ರಾಭಿಷೇಕ, ಪಂಚಾಮೃತ, ವಿಶೇಷ ಮಂಗಳಾರತಿ ಹಾಗೂ ಸಂಜೆ ಪುಷ್ಪ ರಥೋತ್ಸವಗಳೊಡನೆ ವಿವಿಧ ಪೂಜಾ ವಿಧಿಧಿವಿಧಾನಗಳು ನಡೆದವು. ದೇಗುಲದ ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ ಅಡ್ಯಂತಾಯ, ಕಾರ್ಯನಿರ್ವಹಣಾಧಿಧಿಕಾರಿ ಪ್ರಸನ್ನ, ಉಪ ಕಾರ್ಯನಿರ್ವಹಣಾಧಿಧಿಕಾರಿ ಕೃಷ್ಣಮೂರ್ತಿ, ಅಧಿಧೀಕ್ಷಕ ರಾಮಕೃಷ್ಣ ಅಡಿಗ, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ದೇಗುಲದಲ್ಲಿ ಭಕ್ತರಿಂದ ಸಂಗೀತೋಪಾಸನೆ ನಡೆಯಿತು.
Back to Home | Other News