Total Rs. 0
Full Information of an Event
Back to Home | Other News
ಕೊಲ್ಲೂರಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಸರಕಾರವು ರೂ.67 ಕೋಟಿ ಬಿಡುಗಡೆ; ಮುಖ್ಯಮಂತ್ರಿ ಸಿದ್ದರಾಮಯ್ಯ
ದೇವಳದ ಪುರೋಹಿತರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಫಲಪುಷ್ಪ ಹಾಗೂ ದೇವಿಯ ಪ್ರಸಾದ ನೀಡಿ ಗೌರವಿಸಿದರು. ಕೊಲ್ಲೂರು: ಕೊಲ್ಲೂರಿನ ಮೂಲಸೌಕರ್ಯಗಳಾದ ಸಮಗ್ರ ಕುಡಿಯುವ ನೀರು, ಒಳಚರಂಡಿ, ತ್ಯಾಜ್ಯ ವಿಲೇವಾರಿ ಮತ್ತು ವಿಶಾಲ ಭೋಜನಶಾಲೆ ನಿರ್ಮಾಣಕ್ಕೆ ಆದ್ಯತೆ ನೀಡಿ, ಕೊಲ್ಲೂರಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಸರಕಾರವು ರೂ.67 ಕೋಟಿ ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ ಕೊಲ್ಲೂರು ದೇವಳದ ಪುರೋಹಿತರಾದ ಮೂರ್ತಿ ಕಾಳಿದಾಸ್ ಭಟ್, ಸುರೇಶ್ ಭಟ್ ಹಾಗೂ ಗಜಾನನ ಜೋಯಿಸ್ ಗ್ರಾಮಸ್ಥರ ಪರವಾಗಿ ಸಿ‌ಎಂ ಅವರಿಗೆ ಫಲಪುಷ್ಪ ಹಾಗೂ ದೇವಿಯ ಪ್ರಸಾದ ನೀಡಿ ಗೌರವಿಸಿದರು. ಈ ಕಾಮಗರಿಗಳ ಬಗ್ಗೆ ಶಾಸಕ ಕೆ. ಗೋಪಾಲ ಪೂಜಾರಿ ಹಾಗೂ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷಪ್ರಸಾದ ಅಡ್ಯಂತಾಯ ಸರಕಾರದ ಮೇಲೆ ಒತ್ತಡ ಹಾಕಿದ್ದು, ತಕ್ಷಣ ಹಣ ಬಿಡುಗಡೆಗೆ ಆದೇಶಿಸಿದ ಸರಕಾರದ ಕ್ರಮದಿಂದ ಗ್ರಾಮಸ್ಥರಿಗೆ ಹೊಸ ಚೈತನ್ಯ ಬಂದತಾಗಿದೆ.
Back to Home | Other News