Total Rs. 0
Full Information of an Event
Back to Home | Other News
ನವರಾತ್ರಿ ಹಿನ್ನೆಲೆ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿ ಭಕ್ತಸಾಗರ
ಕುಂದಾಪುರ: ಶರನ್ನವರಾತ್ರಿ ಹಿನ್ನೆಲೆ ಕೊಲ್ಲೂರು ಶ್ರೀ ಮೂಕಾಂಬಿಕ ಕ್ಷೇತ್ರದಲ್ಲಿ ಭಕ್ತಸಾಗರವೇ ಹರಿದುಬಂದಿದೆ. ಗುರುವಾರ ಆಯುಧ ಪೂಜೆ ಹಾಗೂ ಶುಕ್ರವಾರ ಬೆಳಿಗ್ಗೆ ವಿದ್ಯಾರಂಭ ಇರುವ ಹಿನ್ನೆಲೆ ಸಾವಿರಾರು ಭಕ್ತರು ದೇವಳದಲ್ಲಿ ಕಂಡುಬಂದರು.

ಗುರುವಾರ ಮಧ್ಯಾಹ್ನದ ವೇಳೆ ನಡೆದ ರಥೋತ್ಸವ ಕಣ್ತುಂಬಿಕೊಳ್ಳಲು ಭಕ್ತರ ನೂಕುನುಗ್ಗಲು ಏರ್ಪಟ್ಟಿತ್ತು. ದೇವಳದ ಒಳಪ್ರಾಂಂಗಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ ಕಾರಣ ನೂಕುನುಗ್ಗಲು ತಪ್ಪಿಸಲು ಪೊಲೀಸರು ಹರಸಾಹಸಪಟ್ಟರು.

ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ, ಸರ್ವ ಸದಸ್ಯರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಲಪ್ಪ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕ್ರಷ್ಣಮೂರ್ತಿ, ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಬೈಂದೂರು ಸಿಪಿಐ ಪರಮೇಶ್ವರ ಗುನಗ ಇದ್ದರು.
Back to Home | Other News