Total Rs. 0
Full Information of an Event
Back to Home | Other News
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಈ - ಸೇವಾ ವ್ಯವಸ್ಥೆ ಗೆ ಚಾಲನೆ ಈ ಸೇವಾ ವ್ಯವಸ್ಥೆ ಭಕ
ಕೊಲ್ಲೂರು : ಕೊಲ್ಲೂರು ದೇವಳದಲ್ಲಿ ಆರಂಭಗೊಂಡಿರುವ ಇ-ಮೈಲ್‌ ಸೇವೆಯ ಸದುಪಯೋಗವಾಗಿ ಭಕ್ತರ ಇಷ್ಟಾರ್ಥ ಪೂರೈಸುವಂತಾಗಲಿ ಎಂದು ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕ ಕೆ. ಲಕ್ಷ್ಮೀನಾರಾಯಣ ಹೇಳಿದರು. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಜೂ. 22ರಂದು ಕೊಲ್ಲೂರು ದೇವಳ ಸಹಭಾಗಿತ್ವದಲ್ಲಿ ಆರಂಭಗೊಂಡ ರಿಸರ್ವೇಶನ್‌ ಹಾಗೂ ವಿವಿಧ ಸೇವೆಗಳ ಸೌಕರ್ಯಗಳ ಕಾರ್ಯಕ್ರಮವನ್ನು ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಅತಿಥಿಯಾಗಿ ಭಾಗವಹಿಸಿದ ಕಾರ್ಪೊರೇಶನ್‌ ಬ್ಯಾಂಕ್‌ನ ಕಾರ್ಯನಿರ್ವಹಣಾಧಿಕಾರಿ ಅಶ್ವಿ‌ನ್‌ ಕುಮಾರ್‌, ಯಾತ್ರಾರ್ಥಿಗಳಿಗೆ ದೇವಳದ ವಿವಿಧ ವ್ಯವಸ್ಥೆಯ ಸಂಪೂರ್ಣ ಮಾಹಿತಿ ನೀಡಲು ಈ ಕೇಂದ್ರ ಸ್ಥಾಪಿಸಲಾಗಿದೆ. ಕಚೇರಿ ನಿರ್ವಹಣೆಯಲ್ಲೂ ಕಂಪ್ಯೂಟರೀಕರಣಗೊಳಿಸಲು ಕಾರ್ಪೊರೇಶನ್‌ ಬ್ಯಾಂಕ್‌ ಕೈ ಜೋಡಿಸಿದೆ. ಇ-ಸೇವೆಯ ಮೂಲಕ ಕೊಲ್ಲೂರು ಶ್ರೀ ಮೂಕಾಂಬಿಕಾ ಭಕ್ತರ ಇಷ್ಟಾರ್ಥ ಪೂರೈಸುವಲ್ಲಿ ನೌಕರರು ಸದಾ ಸಿದ್ಧರಿರಬೇಕು ಎಂದರು. ವೆಬ್‌ ಸೈಟ್‌ ಮೂಲಕ ಆನ್‌ಲೈನ್‌ನಲ್ಲಿ ಎಲ್ಲವನ್ನು ಸವಿವರವಾಗಿ ಭಕ್ತರಿಗೆ ತಲುಪಿಸುವಲ್ಲಿ ಜಿಲ್ಲಾಡಳಿತ ಬದ್ಧವಾಗಿದೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಆರಾಧಕರಾಗಿರುವ ದೇಶ ವಿದೇಶದ ಲಕ್ಷಾಂತರ ಭಕ್ತರ ಅನುಕೂಲತೆಗಾಗಿ ಇ-ಸೇವಾ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಕೊಲ್ಲೂರು ದೇವಳದ ಆಡಳಿತಾಧಿಕಾರಿ ಹಾಗೂ ಕುಂದಾಪುರ ವಿಭಾಗಾಧಿಕಾರಿ ಸದಾಶಿವ ಪ್ರಭು ಸ್ವಾಗತಿಸಿದರು. ಜಿಲ್ಲಾ ಮಾಹಿತಿ ತಂತ್ರಜ್ಞಾನದ ಅಧಿಕಾರಿ ಮಂಜುನಾಥ್‌ ಆನಂದ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.
Back to Home | Other News