Total Rs. 0
Full Information of an Event
Back to Home | Other News
ಡೇವಿಡ್ ಫ್ರಾಲೀ ಮತ್ತು ಪಂದಲ ರಾಜವಂಶಸ್ಥ ಶಶಿಕುಮಾರ ವರ್ಮರಿಂದ ಶ್ರೀದೇವಿಯ ದರ್ಶನ
ಕೊಲ್ಲೂರು ನ. : ಪದ್ಮಭೂಷಣ ಡೇವಿಡ್ ಫ್ರಾಲೀ ಮತ್ತು ಪಂದಲ ರಾಜವಂಶಸ್ಥ ಶಶಿಕುಮಾರ ವರ್ಮ ಅವರು ಶುಕ್ರವಾರ ಸಕುಟುಂಬಿಕಾ ದೇವಸ್ಥಾನಕ್ಕೆ ಆಗಮಿಸಿ ಶ್ರೀದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಭಾರತೀಯ ಸಂಸ್ಕøತಿ, ಸಂಸ್ಕಾರ ಧರ್ಮ,ಯೋಗ ಆಯುರ್ವೇದಗಳಲ್ಲಿ ವಿಶೇಷ ಅಧ್ಯಯನ ಮಾಡಿರುವ ಡೇವಿಡ್ ಫ್ರಾಲೀ ಶ್ರೀದೇವಿಯ ದರ್ಶನ, ಪೂಜೆಯ ಬಳಿಕ ಸುದ್ದಿಗಾರರೊಡನೆಮಾತನಾಡಿ, ಹಿಂದೂ ಧರ್ಮಕ್ಕೆ ಅದ್ಭತವಾದ ಪರಂಪರೆಯಿದೆ.

ಯೋಗದಿಂದ ದೈಹಿಕ ಹಾಗೂ ಮಾನಸಿಕ ವಿಕಸನ ಸಾಧ್ಯವಾಗಿ ವ್ಯಾಧಿಕ್ಷಮತ್ವ ಬಲ ವೃದ್ಧಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಆಯುರ್ವೇದದ ಮೂಲ ಸಿದ್ಧಾಂತದಂತೆ ಜೀವನಕ್ರಮ ರೂಪಿಸಿಕೊಂಡಲ್ಲಿ ದೈಹಿಕ ಮತ್ತು ಮಾನಸಿಕ ಕ್ಷೇಮವಾಗಿರಲು ಸಾಧ್ಯ ಎಂದರು.

ಪಂದಳ ರಾಜವಂಶಜ ಭೇಟಿ :

ಪಂದಳ ರಾಜ ಮನೆತನದ ಸದಸ್ಯ ಹಾಗೂ ಶಬರಿ ಕ್ಷೇತ್ರದ ಆಡಳಿತದಾರರಾದ ಶಶಿಕುಮಾರ ವರ್ಮ ಹಾಗೂ ಮೀರಾ ಶಶಿಕುಮಾರ ವರ್ಮ ಅವರು ಕೊಲ್ಲೂರು ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ದೇಗುಲದ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ ಸಮಿತಿ ಸದಸ್ಯರಾ ಮಡಬಳ್ಳಿ ಜಯರಾಮ ಶೆಟ್ಟಿ ಮಹೇಶ ಪೂಜಾರಿ, ರಮೇಶ ಗಾಣಿಗ ಕೊಲ್ಲೂರು, ಶಿವರಾಮಕೃಷ್ಣ ಭಟ್ಟ್, ಸಂದೀಪ್, ಅಶೋಕ ಶೆಟ್ಟಿ, ಗಿರೀಶ್ ಸೆಟ್ಟಿ ಸಂದೇಶ್, ಶಶಿಕುಮಾರ್ ಹಾಗೂ ದೇಗುಲದ ಅರ್ಚಕರು ಉಪಸ್ಥಿತರಿದ್ದರು.
Back to Home | Other News