Total Rs. 0
Full Information of an Event
Back to Home | Other News
ಕೊಲ್ಲೂರಿನಲ್ಲಿ ಹಸೆಮಣೆಯೇರಿದ ರಾಜೇಶ್ ಕೃಷ್ಣನ್-ರಮ್ಯಾ ವಸಿಷ್ಠ
ಕುಂದಾಪುರ: ಕನ್ನಡ ಚಿತ್ರರಂಗದ ಹೆಸರಾಂತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಸೋಮವಾರ ಬೆಳಿಗ್ಗೆ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದಲ್ಲಿ ಕಿರುತೆರೆನಟಿ ರಮ್ಯಾ ವಸಿಷ್ಠ ಅವರನ್ನು ಸರಳ ರೀತಿಯಲ್ಲಿ ವಿವಾಹವಾದರು. ಕುಟುಂಬ ಸದಸ್ಯರು ಸೇರಿ ಕೇವಲ ಬೆರಳೆಣಿಕೆಯ ಆತ್ಮೀಯರೊಂದಿಗೆ ಭಾನುವಾರ ರಾತ್ರಿ ಕೊಲ್ಲೂರಿಗೆ ಬಂದು ತಂಗಿದ್ದ ರಾಜೇಶ್ ಕೃಷ್ಣನ್ ಸೋಮವಾರ ಬೆಳಿಗ್ಗೆ 10.30ಕ್ಕೆ ಬಾಳ ಸಂಗಾತಿಗೆ ತಾಳಿ ಕಟ್ಟಿದರು. ಸರಳ ರೀತಿಯಲ್ಲಿ ಹಸೆಮಣೆ ಶಾಸ್ತ್ರ ಮುಗಿಸಿದ ದಂಪತಿ ಮಧ್ಯಾಹ್ನ ಕೊಲ್ಲೂರಿನಲ್ಲಿ ಊಟ ಮಗಿಸಿ ಬೆಂಗಳೂರಿಗೆ ವಾಪಸಾದರು.
Back to Home | Other News